ಪುಟ್ಟೇನಹಳ್ಳಿ ಕೆರೆಗೆ ವಸತಿ ಸಂಕೀರ್ಣಗಳ ಸಂಸ್ಕರಿತ ತ್ಯಾಜ್ಯ ನೀರು ಬಿಡುವ ಪ್ರಯೋಗಕ್ಕೆ ಚಾಲನೆ

ಬೆಂಗಳೂರಿನ  ಜೆಪಿ ನಗರದಲ್ಲಿರುವ ಪುಟ್ಟೇನಹಳ್ಳಿ ಕೆರೆಗೆ ಎಲ್‌ ಎಂಡ್‌ ಟಿ ಸೌತ್‌ ಸಿಟಿ ಗೃಹಸ್ತೋಮ `ಸುಗೃಹ’ ದ ಹೆಚ್ಚುವರಿ ತ್ಯಾಜ್ಯ ನೀರನ್ನು ಮಾನದಂಡಗಳಿಗೆ ತಕ್ಕಂತೆ ಸಂಸ್ಕರಿಸಿ  ಬಿಡುವ ಪ್ರಕ್ರಿಯೆಯು ಇಂದು (೧೭ ಮೇ ೨೦೧೫) ಅಧಿಕೃತವಾಗಿ ಆರಂಭವಾಗಿದೆ. ಈ ಪ್ರಯೋಗಕ್ಕೆ ಸಮ್ಮತಿ ನೀಡಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ|| ವಾಮನ್‌ ಆಚಾರ್ಯರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಪರಿಷ್ಕೃತ ತ್ಯಾಜ್ಯ ನೀರನ್ನು ಪರಿಶೀಲಿಸಿದರು.

The process of discharging the treated water from the neighboring apartments to Puttenahalli Lake on an experimental basis has been launched today (17th May 2015) by Dr. Vaman Acharya, Chairman, Karnataka State Pollution Control Board, by inspecting the quality of the discharged water.

Please click here for the earlier news, where KSPCB Chairman had visited the Lake and had in principle agreed to consent to this experiment. 

ಕಳೆದ ಮಾರ್ಚ್‌ ೨೮ರಂದು ಪುಟ್ಟೇನಹಳ್ಳಿ ಕೆರೆಯಲ್ಲಿ ನಡೆದ ಸ್ವಯಂಸೇವಕರ ಕೆರೆ ಶುದ್ಧೀಕರಣ  ದಿನದ ಕಾರ್ಯಕ್ರಮಗಳಲ್ಲಿ ಕರ್ನಾಟಕ ರಾಜ್ಯದ ಉಪ ಲೋಕಾಯುಕ್ತ ಶ್ರೀ ಸುಭಾಷ್‌ ಬಿ ಅಡಿ ಮತ್ತು ಮುಖ್ಯ ಇಂಜಿನಿಯರ್‌ ಶ್ರೀ ಸತೀಶ್‌, ಮಂಡಳಿಯ ಪ್ರಾದೇಶಿಕ  ಅಧಿಕಾರಿ ಶ್ರೀ ಸಿದ್ದರಾಮಯ್ಯ ಹಾಗೂ ಇತರೆ ಅಧಿಕಾರಿಗಳೊಂದಿಗೆ ಡಾ|| ವಾಮನ್‌ ಆಚಾರ್ಯರವರೂ  ಭಾಗಿಯಾಗಿ ಕೆರೆ ದಡದಲ್ಲಿ ಸಸಿಗಳನ್ನು ನೆಟ್ಟಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.

ಈ ಕುರಿತ ಹಿಂದಿನ ವರದಿಗೆ ಇಲ್ಲಿ ಕ್ಲಿಕ್‌ ಮಾಡಿರಿ:  http://wp.me/p34Lf5-f9

Advertisements