Focus group meeting on Climate Change

ಬೆಂಗಳೂರಿನಲ್ಲಿ ಮೇ ೫ರಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹವಾಗುಣ ಬದಲಾವಣೆ ಕುರಿತಂತೆ ಉದ್ಯಮ ಸಂಘಗಳ ಮತ್ತು ವಿವಿಧ ಇಲಾಖೆಗಳ ಪ್ರತಿನಿಧಿಗಳ ಪುಟ್ಟ ಸಭೆ ನಡೆಯಿತು. ಈ ಸಭೆಯಲ್ಲಿ ನವೀಕರಿಸಬಹುದಾದ ಇಂಧನ, ವಿದ್ಯುತ್‌, ನೀರಾವರಿ ಇಲಾಖೆಗಳ ಪ್ರತಿನಿಧಿಗಳು, ಕಾಸಿಯಾ ಪ್ರತಿನಿಧಿ ಭಾಗವಹಿಸಿದ್ದರು. ಮಂಡಳಿಯ ಮುಖ್ಯ ಪರಿಸರ ಅಧಿಕಾರಿ ಶ್ರೀ ನಂದಕುಮಾರ್‌, ಹವಾಗುಣ ಬದಲಾವಣೆ ಜನಾಭಿಪ್ರಾಯ ಸಂಗ್ರಹದ ಉಸ್ತುವಾರಿ ಹೊತ್ತಿರುವ ಶ್ರೀ ಶಂಕರ ಶರ್ಮ, ಮತ್ತು ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.  ಈ ಸಂದರ್ಭದ ಕೆಲವು ಚಿತ್ರಗಳು ಇಲ್ಲಿವೆ:

Advertisements